ಮೊಟ್ಟೆ ಅತ್ಯಂತ ಆರೋಗ್ಯಕರ ಆಹಾರಗಳಲ್ಲಿ ಒಂದು ಎಂಬುವುದು ಸಂದೇಹವೇ ಇಲ್ಲ. ಇದನ್ನು ಮಧುಮೇಹಿಗಳು ತಿನ್ನುವುದು ಒಳ್ಳೆಯದು ಎಂದು ಅಮೆರಿಕನ್ ಡಯಾಬಿಟಸ್ ಅಸೋಷಿಯೇಷನ್ ಹೇಳಿದೆ. ಏಕೆಂದರೆ ಒಂದು ಮೊಟ್ಟೆಯಲ್ಲಿ ಅರ್ಧ ಗ್ರಾಂ ಕಾರ್ಬೋಹೈಡ್ರೇಟ್ಸ್ ಇರುವುದರಿಂದ ಇದನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ. ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ ಕೂಡ ಇರುತ್ತದೆ. ಒಂದು ಮೊಟ್ಟೆಯಲ್ಲಿ 200ಮಿಗ್ರಾಂ ಕೊಲೆಸ್ಟ್ರಾಲ್ ಇರುವುದರಿಂದ ಮೊಟ್ಟೆ ಮಧುಮೇಹಿಗಳಿಗೆ ಒಳ್ಳೆಯದೇ ಎಂಬುವುದರ ಕುರಿತು ಅನೇಕ ಚರ್ಚೆಗಳು ನಡೆದಿವೆ. ಮಧುಮೇಹಿಗಳು ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡುವುದು ತುಂಬಾ ಅವಶ್ಯಕ. ಇಲ್ಲದಿದ್ದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹದ ರಕ್ತದಲ್ಲಿ ಕೊಲೆಸ್ಟ್ರಾಲ್ ಅಧಿಕವಿದ್ದರೆ ಹೃದಯಾಘಾತ ಉಂಟಾಗಬಹುದು. ಆದ್ದರಿಂದ ಮಧುಮೇಹಿಗಳು ಹೃದಯ ಸಂಬಂಧಿ ಸಮಸ್ಯೆಗಳು ಬಾರದಂತೆ ಮುನ್ನೆಚ್ಚರಿಕೆವಹಿಸುವುದು ಹೇಗೆ ಎಂದು ತಿಳಿದಿರುವುದು ಒಳ್ಳೆಯದು.

Leave a Reply

Your email address will not be published.